Protest Music Live – Dharwad on Dr.M M Kalburgi

Posted on Posted in Karnataka Field Notes, Music

 ಕಲಬುರಗಿ ಅಮರ್ ಹೈ

ಮಗನೆ ಮೊಮ್ಮಗನೆ ಬಾರಲೋ
ಕಲಬುರಗಿಯ ದಂಡು ಬಂದಾದ ನೋಡಲೋ

ಕಲಬುರಗಿಯ ದಂಡು ಸತ್ಯ
ಸಂಶೋಧಕರ ಹಿಂಡು ಇದು
ಸತ್ಯಕ್ಕೆ ಸಾವಿಲ್ಲ ಮಗನೆ
ಸುಳ್ಳಿಗೆ ಸುಖವಿಲ್ಲ ಮಗನೆ
ಮೋಸದಿಂದ ಪಾಸಿ ಮಾಡಿ
ಗುರುವಿಗೆ ಗುರಿ ಇಟ್ಟ ಮಗನೆ

ಸತ್ಯದ ಸಂಶೋಧಕನು
ನಿತ್ಯದ ಪರಿಪಾಲಕನು
ಶರಣರ ಸಾಹಿತ್ಯ ವಚನ
ಸಾಹಿತ್ಯ ಜನರದೆಂದ
ಕೆಟ್ಟಿತು ಕಲ್ಯಾಣವೆಂದೇ
ಕಲಿಯುಗ ಕಲಬುರಗಿ ಮುಂದೆ

ಇತಿಹಾಸದ ಪಾಠ ಹೇಳಿ
ಹುಸಿಯಾಟವ ಸೋಸಿ ನೋಡಿ
ಐಕ್ಯನಾಗಲಿಲ್ಲ ಬಸವ
ಹತ್ಯೆಯಾದ ಕ್ರಾಂತಿ ಬಸವ
ಲಿಂಕನ್ ನ ಹತ್ಯೆ ಅಬ್ರಹಾಂ ಲಿಂಕನ್ ನ ಹತ್ಯೆ
ಶಿಲುಬೆಗೇರಿಸಿದರು ಮತ್ತೆ ಮತ್ತೆ

ಹಿಂದೂ ಧರ್ಮ ಧರ್ಮವಲ್ಲ
ವೀರಶೈವರು ಹಿಂದೂ ಅಲ್ಲ
ಹಿಂದೂ ಧರ್ಮ ಧರ್ಮವಲ್ಲ
ಲಿಂಗಾಯತರು ಹಿಂದೂ ಅಲ್ಲ
ಪಾನ್ಸರೆ ದಾಭೋಲ್ಕರರನು
ಗುಂಡಿಕ್ಕಿದ ಮುಂಡೆ ಮಕ್ಕಳೆ
ಬಂಡರಿವರು ಷಂಡರಿವರು
ಮೌಢ್ಯದ ಪರಿವಾರದವರು

ಅಂಬಲಿ ಕಂಬಳಿ ಆಸ್ತಿ
ಮಿಕ್ಕಿದೆಲ್ಲ ಜಾಸ್ತಿ
ವಿ ಸಿ ವಿದ್ವಾಂಸನಾಗಿ
university ಯೋಧನಾಗಿ
ಕಲ್ಯಾಣ ನಗರ ಇಂದು
ಕಣ್ಮರೆಯಾಯಿತು ಅಂದು

ಜಾತಿವಾದಿ ತಾಯ್ಗಂಡರೇ
ಕೋಮುವಾದಿ ಮತಾಂಧರೇ
ಸಂಶೋಧಕ ಸತ್ತಿಲ್ಲ
ಕಲಬುರಗಿ ಕೊನೆಯತನಕ
ನಮ್ಮೆಲ್ಲರ ಶಪಥ ಒಂದೇ
ನೀ ನಡೆದ ದಾರಿ ನಮಗೆ ಮುಂದೆ

 

Leave a Reply