Indefinite Strike by Women. Kalburgi. February 6. 2017

Posted on Posted in Karnataka Field Notes, Pedagogy, Streets, Uncategorized

Karnataka Janaarogya Chaluvali along with progressive sanghatans across the state are initiating an indefinite protest from 6th February 2017 in Kalburgi condemning the state government’s inaction, neglect and disregard towards the women who have suffered unwarranted hysterectomies in Kalburgi district

ಕರ್ನಾಟಕ ಜನಾರೋಗ್ಯ ಚಳುವಳಿ

ಕಲಬುರ್ಗಿ ಜಿಲ್ಲೆಯ ಮಹಿಳೆಯರ ನ್ಯಾಯದ ಹೋರಾಟಕ್ಕೆ ಕೈಜೋಡಿಸಲು ಮನವಿ

ಬಂಧುಗಳೇ,

ಕಲಬುರ್ಗಿ ಜಿಲ್ಲೆಯಲ್ಲಿ ಅನಗತ್ಯ ಗರ್ಭಕೋಶ ಶಸ್ತ್ರಚಿಕಿತ್ಸೆಗಳಿಗೆ ಗುರಿಯಾಗಿ ಸಾವಿನ ಅಂಚಿಗೆ ತಲುಪಿರುವ ಮಹಿಳೆಯರ ಬಗ್ಗೆ ಸರ್ಕಾರದ ನಿರ್ಲಕ್ಷೆ ಮತ್ತು ತಾತ್ಸಾರವನ್ನು ಖಂಡಿಸಿ ಕರ್ನಾಟಕ ಜನಾರೋಗ್ಯ ಚಳುವಳಿ ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯದ ಹಲವಾರು ಪ್ರಗತಿಪರ ಸಂಘಟನೆಗಳು 6ನೇ ಫೆಬ್ರವರಿ 2017 ರಿಂದ ಅನಿರ್ಧಿಷ್ಟಿತ ಧರಣಿಯನ್ನು ಪ್ರಾರಂಭಿಸುತ್ತಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ಪರಿಹಾರ, ತಪ್ಪಿತಸ್ಥ ವೈದ್ಯರ/ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಮತ್ತು ಇಂತಹ ಉಲ್ಲಂಘನೆಗಳು ಮಂದೆ ಘಟಿಸದಂತೆ ಮುಂಜಾಗೃತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುವ ವರೆಗೂ ಈ ಹೋರಾಟವನ್ನು ಮುಂದುವರಿಸಲಿದ್ದೇವೆ.

ಮಹಿಳೆಯರ ನ್ಯಾಯಯುತವಾದ, ಉಳಿವಿನ ಹೋರಾಟಕ್ಕೆ ಕೈ ಜೋಡಿಸಿ, ಮಹಿಳೆಯರೊಂದಿಗೆ ನಿಲ್ಲಬೇಕೆಂದು ಮನವಿ ಮಾಡುತ್ತಿದ್ದೇವೆ.

ಅನಿರ್ಧಿಷ್ಟಿತ ಧರಣಿಯ ಮುನ್ನ 25 ಜನವರಿ 2017 ರಿಂದ 1 ಫೆಬ್ರವರಿ ವರೆಗೆ ಕಲಬುರ್ಗಿ ಜಿಲ್ಲೆಯಲ್ಲಿನ ಗ್ರಾಮ/ ತಾಂಡಗಳಿಗೆ ಭೇಟಿ ನೀಡಿ ಸಂತ್ರಸ್ತ ಮಹಿಳೆಯರು ಸೇರಿದಂತೆ ಎಲ್ಲಾ ಮಹಿಳೆಯರನ್ನು ಸಂಘಟಿಸಿ ಹೋರಾಟದೆತ್ತ ಕರೆತರುವ ಒಂದು ಅಭಿಯಾನವನ್ನು ಕೈಗೊಳ್ಳುತ್ತಿದ್ದೇವೆ.

ಸಂತ್ರಸ್ತ ಮಹಿಳೆಯರ ನ್ಯಾಯದ ಹೋರಾಟಕ್ಕೆ ತಾವು ಕೈಜೋಡಿಸಿ ಸಂಪನ್ಮೂಲಗಳನ್ನು ಒದಗಿಸುವಲ್ಲಿಯೂ ನೆರವಾಗುತ್ತೀರೆಂದು ನಿರೀಕ್ಷಿಸುತ್ತಾ,

ಹೋರಾಟದ ವಂದನೆಗಳೊಂದಿಗೆ,

ಕರ್ನಾಟಕ ಜನಾರೋಗ್ಯ ಚಳುವಳಿ,

ಹೆಚ್ಚಿನ ಮಾಹಿತಿಗಾಗಿ:  9900942508, 9900955778, 953538557.
————————————————-
ನಮ್ಮ ಬ್ಯಾಂಕಿನ ವಿವರಗಳು:
Sarvodaya Rural Development Project
A/c Number: 11008101000159
Name of the Bank: Pragathi Krishna Gramin Bank

Branch: V.K.Salagar

IFSC code:  CNRB000PGB1

Leave a Reply